ಹಳೆ ಹಾಡುಗಳನ್ನು ಕೆಳುವುದೊಂದು ಮಜಾ. ಆದರೆ ಅದಕ್ಕೊಂದು ಸಮಯ ಸಂಧರ್ಭ ಇರಬೇಕು .ನನಗೆ ತುಂಬಾ ಇಷ್ಟವಾಗುವ ಕೆಲವು ಸಂಧರ್ಭಗಳಿವು. ಸಂಜೆಯ ಸಮಯದಲ್ಲಿ ನಿಮ್ಮ ಬಲಗಡೆಗೆ ಸೂರ್ಯಾಸ್ತವಾಗುತ್ತಿರುತ್ತದೆ ನೀವೊಂದು ಕಾರಿನಲ್ಲೋ ಬಸ್ಸಿನಲೋ ಕಿಟಕಿಯ ಕಡೆ ಕುಳಿತು ಪ್ರಯಾಣ ಮಾಡುತ್ತಿದ್ದಿರ. ಒಂದು ಮೋನೋ ಸ್ತೀರಿಯೋನಲ್ಲಿ ಹಳೆಯ ಹಿಂದಿ ಹಾಡುಗಳು ಅದಷ್ಟಕ್ಕವೇ ಬರುತಿವೆ . ನಿಮ್ಮ ಬಸ್ಸು ೪೦-೫೦ ಕಿಲೋಮೀಟರ್ ವೇಗದಲ್ಲಿ ಹೋಗುತ್ತಿದೆ . ನಿಮಗೆ ದಿನದ ಕೆಲವು ವಿಷಯಗಳು ಸಣ್ಣಕ್ಕೆ ತಲೆಯಲ್ಲಿ ಓಡುತ್ತಿವೆ. ಏನೋ ಒಂಥರ ಖುಷಿ.
ಎರಡನೆಯದು ನನ್ನ ಚಿಕ್ಕಂದಿನಲ್ಲಿ ನಮ್ಮ ಸೈಕಲ್ ಪಂಕ್ಚರ್ ಆದಾಗ ವೆಂಕಟೇಶ್ ಅಪ್ಪನ ಸೈಕಲ್ ಶಾಪ್ಗೆ ಸೈಕಲ್ ತಳ್ಳಿಕೊಂಡು ಹೋಗಿ ಪಂಕ್ಚರ್ ಹಾಕಿ ಕೊಡುವ ವರೆಗೂ ಆತ ತನ್ನ ಹಳೆಯ ನ್ಯಾಷನಲ್ ಟೇಪ್ ರೆಕಾರ್ಡರ್ ನಲ್ಲಿ ಹಳೆಯ ತೆಲುಗು ಹಾಡುಗಳನ್ನು ಹಾಕಿರುತ್ತಿದ್ದ ಎಲ್ಲರಿಗು ಏನೋ ಖುಷಿ
ಮೂರನೆಯದು ನಾನು ಓದುತ್ತಿದ್ದ ಸ್ಕೂಲಿನ ಬಸ್ ಸ್ಟಾಪ್ ನಲ್ಲಿ ಒಬ್ಬ ಮುದುಕ ಟೀ ಅಂಗಡಿ ಇಟ್ಟುಕೊಂಡಿದ್ದ . ನಮ್ಮ ಸ್ಕೂಲ್ ೩:೩೦ ಕ್ಕೆ ಬಿಡುತ್ತಿದ್ದರು. ನಮ್ಮ ಬಸ್ ೪:೦೦ ಗಂಟೆಗೆ ಬರುತ್ತಿತ್ತು . ಅಲ್ಲಿಯವರೆಗೂ ನಮಗೆ ಹಿತ ಕೊಡುತ್ತಿದ್ದುದು ಮುದುಕನ ಹಳೆ ಟೇಪ್ ರೆಕಾರ್ಡರ್ ಇಂದ ಬರುತ್ತಿದ್ದ ಹಳೆ ಕನ್ನಡ ಹಾಡುಗಳು .
ತಿರಾ ಇತ್ತೀಚಿಗೆ ಇಂಥ ಒಂದು ಸಂಧರ್ಭ ವನ್ನು ನಾನೇ ಕ್ರಿಯೇಟ್ ಮಾಡಿಕೊಂಡೆ . ಬಟ್ಟೆ ಹೊಗೆಯಲು ತಿರಾ ಬೇಜಾರುಗುತ್ತಿತ್ತು . ಅದಕ್ಕೆ ನನ್ನ ಕಂಪ್ಯೂಟರ್ ನಲ್ಲಿ ಹಳೆ ಲತಾ ಮಂಗೇಶ್ಕರ ಹಾಡುಗಳನ್ನೂ ಹಾಕಿ ಕೇಳುತ್ತ ಹೊಗೆದೆ. ಕೆಲಸ ಭಾರಿ ಖುಷಿ ಇಂದ ಸಾಗಿತು.
No comments:
Post a Comment