ಬಹಳ ದಿನಗಳ ನಂತರ ಇವತ್ತು ಹೈದರಾಬಾದಿನಲ್ಲಿ ಮಳೆ ಆಗಿದೆ. ಸುತ್ತಲು ಮೌನ. ಇವತ್ತು ಮದ್ಯಾಹ್ನ ಸುಮಾರು ಹೊತ್ತು ನಿದ್ದೆ ಹೋದೆ. ಏಕೋ ಏನೋ ಇವತ್ತು ಸರಿಯಾದ ನಿರ್ಧಾರ ಕೈಗೊಳ್ಳಲಿಲ್ಲ ಎಂಬ ಫೀಲಿಂಗ್. ಮನೆ ಕ್ಲೀನ್ ಮಾಡಬೇಕಿತ್ತು ಆದರೆ ಮೂಡ್ ಇಲ್ಲ.
ಏಕೋ ಮನೆ ಕಡೆ ಸಕ್ಕತ್ ನೆನಪಾಗುತ್ತಿದೆ. ದೀಪದಲ್ಲಿ ಎಣ್ಣೆ ಆಗಿ ಹೋಗಿದೆಯೇನೋ ಅನ್ನಿಸುತ್ತಿದೆ. ಬದಲಾವಣೆ ಬೇಕೆನ್ನೆಸುತ್ತಿದೆ. ಜನ ಅಲ್ಲೇ ಬೆಂಗಳೂರಿನಲ್ಲೇ ಕುಳಿತು ಸಾಕಷ್ಟು ಸಾಧಿಸುತ್ತಿದ್ದಾರೆ . ಸಾಕಷ್ಟು ಸಂಪಾದಿಸುತ್ತಿದ್ದಾರೆ .
ಮಳೆ ಬಿದ್ದಿದ್ದರಿಂದ ಲೈಟ್ ಆಗಿ ಸೆಕೆ ಆಗುತ್ತಿದೆ. ರೂಮಿನಲ್ಲಿ ಕುಳಿತು ಬಾಲಾಜಿ ಅದ್ಯಾವುದೋ ಇಂಗ್ಲಿಶ್ ಚಿತ್ರ ನೋಡುತ್ತಿದ್ದಾನೆ. ಫ್ಯಾನ್ ತನ್ನಷ್ಟಕ್ಕೆ ತಿರುಗುತ್ತಿದೆ. ನಾವು ಇಲ್ಲಿಗೆ ಬಂದಾಗ ಕೊಂಡದ್ದು. ಕಿಟಕಿಯಿಂದ ತಣ್ಣಗೆ ಗಾಳಿ ಬರುತ್ತಿದೆ. ನಾನು ಹೊರಗೆ ಸ್ವಲ್ಪ ಅಡ್ಡಾಡಿಕೊಂಡು ಬರಬೇಕೆಂದು ಹೊರಟೆ .
No comments:
Post a Comment