Tuesday, May 10, 2011

ಬೋರ್ ದಿನಗಳು 1

ಇವತ್ತು ಕನ್ನಡದಲ್ಲಿ ಬರೆಯ ಬೇಕೆನ್ನಿಸಿಸುತ್ತದೆ ಏನೇ ಹೊಸ ಭಾಷೆ ಕಲಿತರು ನಮ್ಮ ಪ್ರಾಥಮಿಕ ಶಿಕ್ಷಣ ಯಾವ ಭಾಷೆಯಲ್ಲಗುತ್ತದೋ ಹಾಗು ನಮ್ಮ ಹೆಚ್ಚಿನ ಗೆಳೆಯರು ಯಾವ ಭಾಶಿಕರಾಗಿರುತ್ತರೋ ಆ ಭಾಷೆಯಲ್ಲೇ ನಮ್ಮ ಮೆದುಳು ಚಿಂತಿಸುತ್ತದೆ ಎಂಬುದು ನನ್ನ ವಾದ.
ಹೋಗಲಿ, ಈಗ ನಾನು ಬರೆಯಬೇಕೆಂದುಕೊಂಡದ್ದು ಏನಂದರೆ, ಯಾಕೋ ಎರಡು ದಿನಗಳಿಂದ ಸಕ್ಕತ್ ಬೋರ್ ಆಗ ತೊಡಗಿದೆ. ಮನಸ್ಸಿಗೆ ಸವಾಲು ಹಾಕಬಹುದಾದಂತ ಯಾವುದೇ ಕೆಲಸದಲ್ಲಿ ತೊಡಗಿಸಿಕೊಳ್ಳ ಲಾಗುತ್ತಿಲ್ಲ. ಸುಮ್ಮನೆ ಕಾಲಹರನವಾಗುತ್ತಿರುವಂತೆ ಅನ್ನಿಸುತ್ತಿದೆ.
ಬೋರ್ ಆದಾಗ ಏನು ಮಾಡಬೇಕು? ಏನಾದರು ಪೆನ್ ತೆಗೆದುಕೊಂಡು ಗೀಚಬೇಕೆನ್ನೆಸಿತ್ತದೆ. ಸುಮ್ಮನೆ ವಿಜಯವಾಡದ ರಸ್ತೆಯಲ್ಲಿ ನಡೆಯುತ್ತಾ ಹೋಗಬೇಕೆನ್ನಿಸುತ್ತದೆ, ಆದರೆ ಈ ಉರಿ ಬಿಸಿಲಿಗೆ ಕಾಲು ಸೋಲುತ್ತದೆ ಈ ಹೈದರಾಬಾದಿನ ಬಿಸಿಲೆ ಅಂತದ್ದು
ಮನಸ್ಸಿಗೆ ಸದಾ ಸವಾಲು ಎಸೆಯುವಂ ತದ್ದು.
ಈಗಷ್ಟೇ ಒಬ್ಬ ಕೆಲಸಕ್ಕೆ ರಾಜಿನಾಮೆ ಕೊಟ್ಟ ಗೆಳೆಯನೊಬ್ಬನ ಜೊತೆ ಚಾಟ್ ಮಾಡುತ್ತಿದ್ದೆ. ಯಾಕೆ ಕೆಲಸ ಬಿಟ್ಟೆ ಅಂತ ಕೇಳಿದ್ದಕ್ಕೆ ಬೋರ್ ಆಯಿತು ಬಿಟ್ಟೆ ಅಂದ. ಮತ್ತೇನ್ ಮಾಡ್ತಿಯ ಅಂದಿದ್ದಕ್ಕೆ ಇಲ್ಲ ಸದ್ಯಕ್ಕೆ ಬೇಸಿಗೆ ರಜೆ ತೆಗೆದುಕೊಂಡಿದ್ದೇನೆ ಮುಂದೆ ಆಲೋಚನೆ ಮಾಡ್ಬೇಕು, ಈಗ ಕೈಲಿ ೨ ಆಫರ್ ಇದಾವೆ, ಇನ್ನು ಪ್ರತಿ ವರ್ಷ ಹೀಗೆ ಮಾದುತ್ತೆನಂದ, ಅವನ ಆತ್ಮವಿಶ್ವಾಸವನ್ನು ನಿಜಕ್ಕೂ ಮೆಚ್ಚಿಕೊಂಡೆ . ಅವನು ಅಂದುಕೊಂಡ ಹಾಗೆ ಮಾಡುತ್ತಾನೋ ಇಲ್ಲವೋ ಗೊತ್ತಿಲ್ಲ, ಯಾಕೋ ಆ ಐಡಿಯಾ ಇಷ್ಟ ಆಯಿತು. ನಾನು ನನ್ನ ಜೀವನದಲ್ಲಿ ಹಾಗಾಗ ಬೇಕೆಂದು ಸದಾ ದೇವರಲ್ಲ್ಲಿ ಕೇಳಿಕೊಳ್ಳುತ್ತೇನೆ. ಅಂದರೆ ವರ್ಷದಲ್ಲಿ ೧೦ ತಿಂಗಳು ದುಡಿಮೆ ೨ ತಿಂಗಳ ರೆಸ್ಟ್. ಇದರಿಂದ ನಮ್ಮ ಜೀವನದಲ್ಲಿ ಮಾವಿನ ಮರದ ಹಾಗೆ ಇರುತ್ತದೆ. ಹಾಗಾದಲ್ಲಿ ಸದಾ ಹೊಸತನ ಜೀವನದಲ್ಲಿ ಅರಳುತ್ತಿರುತ್ತದೆ.